ಸತ್ಯು, ಎಂ ಎಸ್
	1930-. ಹಿಂದಿ, ಕನ್ನಡ, ಉರ್ದು ಚಲನಚಿತ್ರಗಳ ಹಾಗೂ ರಂಗಭೂಮಿಯ ಪ್ರಸಿದ್ಧ ನಿರ್ದೇಶಕರು, ಮೈಸೂರಿನಲ್ಲಿ 1930ರಲ್ಲಿ ಜನಿಸಿದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪದವೀಧರರಾದ ಬಳಿಕ 1952ರಲ್ಲಿ ಮುಂಬಯಿಗೆ ಹೋಗಿ ನೆಲೆಸಿದರು. ಮುಂಬಯಿ ಮತ್ತು ದೆಹಲಿಗಳಲ್ಲಿ ಹಲವಾರು ನಾಟಕಗಳನ್ನು ನಿರ್ದೇಶಿಸಿ ಪ್ರದರ್ಶಿಸಿದರು. ಪ್ರಸಿದ್ಧ ಚಲನಚಿತ್ರ ತರಬೇತಿ ಸಂಸ್ಥೆಯಾದ ಐಪಿಟಿಎ (ಇಪ್ಟಾ) ಹಾಗೂ ಅದರ ಹಲವು ಅಂಗಸಂಸ್ಥೆಗಳಲ್ಲಿ ಸಹಯೋಜಕರಾಗಿ ಹಲವಾರು ವರ್ಷ ಸೇವೆ ಸಲ್ಲಿಸಿದರು. ಪ್ರಸಿದ್ಧ ರಂಗನಿರ್ದೇಶಕರಾದ ಹಬೀಬ್ ತನ್ವೀರ್ ಅವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ಸಿನಿಮಾ ಪತ್ರಿಕೆಯಲ್ಲಿಯೂ ಹಲವು ವರ್ಷ ಕಾರ್ಯನಿರ್ವಹಿಸಿದರು. ಬಾಲ್‍ರಾಜ್ ಸಾಹ್ನಿ ಅವರ ಜುಹು ಆರ್ಟ್ ಥಿಯೇಟರ್‍ನಲ್ಲಿಯೂ ಸೇವೆಸಲ್ಲಿಸಿದರು. 1969ರಲ್ಲಿ ಇವರು ಕವಿ ಮಿರ್ಜಾಗಾಲಿಬ್‍ನ ಜೀವನ ಚರಿತ್ರೆಯನ್ನೊಳ ಗೊಂಡ ಆಕ್ರಿಶಾಮ್ ಎಂಬ ನಾಟಕವನ್ನು ನಿರ್ದೇಶಿಸಿದರು. ಈ ನಾಟಕದ ಕರ್ತೃ ಕೈಫಿû ಅಜಿû್ಮ. ಅವರೂ ಸಾಹ್ನಿಯವರೂ ಈ ನಾಟಕದಲ್ಲಿ ಮುಖ್ಯ ಪಾತ್ರಧಾರಿಗಳಾಗಿದ್ದರು. ಸರ್ವೇಶ್ವರ್ ದಯಾಳ್ ಸಕ್ಸೇನರ ಬಕ್ರಿ, ಬ್ರೆಕ್ಟನ ಕಕೇಷಿಯನ್ ಚಾಕ್ ಸರ್ಕಲ್ ನಾಟಕವನ್ನಾ ಧರಿಸಿದ ಸ¥sóÉೀದ್ ಕುಂಡಲಿ, ಪ್ರೇಮ್‍ಚಂದರ ಕಥೆಯ ರೂಪಾಂತರ ಮೋಟೇರಾಮ್ ಕಾ ಸತ್ಯಾಗ್ರಹ್ ಮೊದಲಾದ ಅತ್ಯಂತ ಪ್ರಮುಖ ನಾಟಕಗ ಳನ್ನು ಇವರು ನಿರ್ದೇಶಿಸಿದರು. ಜುಹು ಆರ್ಟ್ ಥಿಯೇಟರ್ ಗಾಗಿ ಸಾಹ್ನಿಯವರು ರಚಿಸಿದ ಸೂಕ್ಷ್ಮರೂಪ್ ನಾಟಕವನ್ನೂ ಅದ್ಭುತವಾಗಿ ನಿರ್ದೇಶಿಸಿದರು. ಚಿತ್ರ ನಿರ್ದೇಶಕ ಚೇತನ್ ಆನಂದ್ ಅವರ ಹಕೀಕತ್ (1964) ಹಾಗೂ ಸಾಕ್ಷ್ಯ ಚಿತ್ರಕಾರರಾದ ಹೋಮಿಸೇತ್ನಾ ಮತ್ತು ಜುಲ್ ವೆಲಾನಿ ಮೊದಲಾದವರ ಚಿತ್ರ ನಿರ್ದೇಶನಗಳಲ್ಲಿ ಸಹನಿರ್ದೇಶಕರಾಗಿಯೂ ಕೆಲಸ ಮಾಡಿದರು. ಕೆ.ಎ.ಅಬ್ಬಾಸ್ ಅವರ ಕಥೆಯನ್ನಾಧರಿಸಿದ ಅಲೆಗ್ಸಾಂಡರ್ ಜûುರಿಡಿ ಅವರ ಇಂಡೋ-ಸೋವಿಯತ್ ಸಹನಿರ್ಮಾಣದ ಚಾರ್‍ನಯಾ ಗೋಡಾ(1971) ಎಂಬ ಮಕ್ಕಳ ಚಿತ್ರವನ್ನು ಇವರು ನಿರ್ದೇಶಿಸಿದ್ದಾರೆ. 20 ಚಲನಚಿತ್ರಗಳನ್ನೂ 12 ಸಾಕ್ಷ್ಯಚಿತ್ರಗಳನ್ನೂ ನಿರ್ದೇಶಿಸಿರುವ ಇವರು ಸದ್ಯದಲ್ಲಿ ದೂರದರ್ಶನದ ಧಾರಾವಾಹಿಗಳ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಮಾಸ್ತಿ ವೆಂಕಟೇಶ ಐಯ್ಯಂಗಾರ್ ಅವರ ಸಣ್ಣ ಕಥೆಗಳನ್ನು ರೂಪಾಂತರಿಸಿ ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಪ್ರತಿಧ್ವನಿ ಎಂಬ ಶೀರ್ಷಿಕೆಯಲ್ಲಿ ಧಾರಾವಾಹಿ ನಿರ್ದೇಶಿಸಿದ್ದಾರೆ.

	ಏಕ್ ಥಾ ಚೋಟು ಏಕ್ ಥಾ ಮೋಟು (1967), ಗಾಲಿಬ್ (ಸಾಕ್ಷ್ಯಚಿತ್ರ, 1969) ಇರ್ಷದ್ ಪಂಜತನ್ (ಸಾಕ್ಷ್ಯಚಿತ್ರ, 1969), ಕಾಲಾ ಪರ್ವತ್ (1970), ಚಾರ್ ನಯಾ ಗೋಡಾ (1971), ಗರಮ್ ಹವಾ (1973), ಕನ್ನೇಶ್ವರರಾಮ (1977), ಚಿತೆಗೂ ಚಿಂತೆ (1978), ಬರ(1980), ಯುವರ್ ಎನಮಿ (ಟಿ.ಬಿ.ಸಾಕ್ಷ್ಯಚಿತ್ರ, 1981), ಕಹಾಂಕಹಾಂಸೆ ಗುಜರ್‍ಗಯೆ(1986), ಚೋಲಿದಾಮನ್(1988), ಕಯರ್ (1991) ಮೊದಲಾದವು ಇವರು ನಿರ್ದೇಶಿಸಿರುವ ಕೆಲವು ಪ್ರಮುಖ ಚಿತ್ರಗಳು ಹಾಗೂ ಸಾಕ್ಷ್ಯಚಿತ್ರಗಳು. ಇವರಿಗೆ ದಕ್ಷಿಣ ಏಷ್ಯ ಸಿನಿಮಾ ಪ್ರತಿಷ್ಠಾನದ 2004ರ ಪ್ರಶಸ್ತಿ ಲಭ್ಯವಾಗಿದ್ದು ಇವರು ಈ ಪ್ರಶಸ್ತಿ ಗಳಿಸಿದ ಮೊದಲಿಗರಾಗಿದ್ದಾರೆ. ಶಮಾಜೈದಿ ಇವರ ಪತ್ನಿ. ಇವರೂ ಪತಿಯೊಡನೆ ರಂಗಭೂಮಿಯ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಶಾಮ್ ಬೆನಗಲ್ ಅವರ ಚಿತ್ರಗಳಿಗೆ ಚಿತ್ರಕಥೆ ಬರೆಯುತ್ತಾರೆ. ಇಪಾ ದ (ಇಂಡಿಯನ್ ಪೀಪಲ್ ಥಿಯೇಟರ್ ಅಸೋಸಿಯೇಶನ್) ರಂಗಭೂಮಿ ಚಟುವಟಿಕೆಯಲ್ಲಿ ಇವರ ಸಹಯೋಗವಿತ್ತು.	
				
			*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ